ನನ್ನ ಅಜ್ಜನವರಾದ ದಿವಂಗತ ಶ್ರೀ ಗೌಡ ಹನುಮಯ್ಯನವರು, ತರಿಕೆರೆ ಪುರಸಭೆಯ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಸಾಮಾಜಿಕ ಬದಲಾವಣೆಗೆ ಅವರಿಗಿದ್ದ ಬದ್ಧತೆಗೆ ತರೀಕೆರೆಯ ಜನರ ಮನಸ್ಸಲ್ಲಿ ಬೇರೂರಿದ್ದಾರೆ ಹಾಗೂ ತರೀಕೆರೆಯ ಪ್ರಮುಖ ಬೀದಿಗೆ ಅವರ ಹೆಸರನ್ನು ಕೂಡ ಇಡಲಾಗಿದೆ.
ನನ್ನ ತಂದೆಯವರಾದ ಶ್ರೀ ಜಿ. ಹೆಚ್. ನಂಜುಂಡಪ್ಪ ನವರು ಕೂಡ ಅವರ ಹಾದಿಯಲ್ಲಿಯೇ ಸಾಗಿ ತರೀಕೆರೆ ಕ್ಷೇತ್ರದಲ್ಲಿ ರಾಜಕೀಯ ಕಾರ್ಯಕರ್ತರಾಗಿ, ತರೀಕೆರೆ ಪುರಸಭೆ ಅಧ್ಯಕ್ಷರಾಗಿ ಕೂಡ ಸೇವಾ ಸಲ್ಲಿಸಿರುತ್ತಾರೆ.
ಸಮಾನ ಹಾಗೂ ಸಾಮರಸ್ಯ ಸಮಾಜವನ್ನು ಸೃಷ್ಟಿಸಿ, ಜನರ ಕಷ್ಟ – ಸುಖಗಳಲ್ಲಿ ಭಾಗಿಯಾಗುವ ಪವಿತ್ರ ಕಾರ್ಯ.
ಮಹಾತ್ಮ ಗಾಂಧಿ, ಜವಹರಲಾಲ್ ನೆಹರು, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಆದರ್ಶಗಳಿಂದ ಪ್ರೇರಿತ.
ಸಮಾಜದಲ್ಲಿ ತುಳಿತಕ್ಕೊಳಗಾದವರ ಅಗತ್ಯತೆಗಳಿಗೆ ಸ್ಪಂದಿಸುವ ಮೂಲಕ ಮತ್ತು ಕಾಂಗ್ರೆಸ್ ಪಕ್ಷದ ಕಲ್ಯಾಣ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಸಾಮಾಜಿಕ ಬದಲಾವಣೆ ತರುವುದು.