ಪ್ರಸ್ತುತ ಅಭಿವೃದ್ಧಿ ಕಾರ್ಯಗಳು
2023 ಮೇ ತಿಂಗಳಿನಿಂದ, 2ನೇ ಬಾರಿ ಶಾಸಕನಾಗಿ ಆಯ್ಕೆಯಾದ ಮೇಲೆ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು
ಇಂದು ತರೀಕೆರೆ ಬಸ್ ನಿಲ್ದಾಣದ ಆವರಣದಲ್ಲಿ, ನಮ್ಮ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ - ಕರ್ನಾಟಕ ರಾಜ್ಯದ್ಯಂತ ಮಹಿಳೆಯರಿಗೆ ನಗರ ಸಾರಿಗೆ ಸಾಮಾನ್ಯ ಮತ್ತು ವೇಗದೂತ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುವ ಶಕ್ತಿ ಯೋಜನೆಗೆ ಚಾಲನೆ ನೀಡಿ, ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸಲಾಯಿತು. #congressguarantee #freebusforwomen #karnatakacongressgovt #Siddaramaiah #DKShivakumar #GHSrinivasa #Tarikere #MLA #ghs
Posted by Srinivas Gowda Hanumaiah on Sunday, 11 June 2023
ಶಕ್ತಿ ಯೋಜನೆಗೆ ಚಾಲನೆ
ನಮ್ಮ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ "ಗೃಹ ಜ್ಯೋತಿ - ಉಚಿತ ಬೆಳಕು, ಸುಸ್ಥಿರ ಬದುಕು" ಯೋಜನೆಗೆ ಚಾಲನೆ ನೀಡಲಾಯಿತು. #ghruhajyothi #congressguarantee #dkshivakumar #siddaramaiah #KJGeorge #aicc #kpcc #karntakacongress #karnatakacongressgovt #GHSrinivasa #Tarikere #MLA #ನುಡಿದಂತೆ_ನಡೆ_ಅಭಿವೃದ್ಧಿಯ_ಕಡೆ
Posted by Srinivas Gowda Hanumaiah on Saturday, 5 August 2023
ಗೃಹ ಜ್ಯೋತಿ ಯೋಜನೆಗೆ ಚಾಲನೆ
ಇಂದು ಉಬ್ರಾಣಿ ಅಮೃತಾಪುರ ಏತ ನೀರಾವರಿ ಯೋಜನೆ ಹಂತ-1 ಭದ್ರಾವತಿ ಯಲ್ಲಿ ಈ ಯೋಜನೆಯ ಪಂಪ್ ಹೌಸ್ ನಲ್ಲಿ ಹೊಸದಾಗಿ ಪಂಪ್ ಗಳ ಜೋಡಣೆಯ ನಂತರ ತರೀಕೆರೆ ಮತ್ತು ಚನ್ನಗಿರಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚನ್ನಗಿರಿ ಶಾಸಕರಾದ ಬಸವರಾಜ್ ಶಿವಗಂಗಾ ರವರ ಜೊತೆಗೂಡಿ ಚಾಲನೆ ನೀಡಲಾಯಿತು. ಇದೆ ಸಂದರ್ಭದಲ್ಲಿ ಆ ಭಾಗದ ರೈತರ ಜೊತೆಗೆ ಸಂವಾದ ನಡೆಸಲಾಯಿತು. #ghsrinivasa #tarikere #MLA #Congress
Posted by Srinivas Gowda Hanumaiah on Tuesday, 25 July 2023
ಉಬ್ರಾಣಿ - ಅಮೃತಾಪುರ ಏತ ನೀರಾವರಿ ಯೋಜನೆಗೆ ಚಾಲನೆ
ತರೀಕೆರೆ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ - 69 ರ ಸರಪಳಿ 169.88 ರಿಂದ 172.38 ಕಿ.ಮೀ. ವರೆಗೆ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವ ಕಾಮಗಾರಿ ಹಾಗೂ ತರೀಕೆರೆ ಪುರಸಭೆ ವ್ಯಾಪ್ತಿಯ ಬಿ. ಹೆಚ್ ರಸ್ತೆ ಪಾದಚಾರಿ ಮಾರ್ಗದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ
ತರೀಕೆರೆ ವಿಧಾನಸಭಾ ಕ್ಷೇತ್ರದ ಐತಿಹಾಸಿಕ ಪ್ರವಾಸಿ ತಾಣಗಳಾದ ಕೆಮ್ಮಣ್ಣುಗುಂಡಿಯ ಕೃಷ್ಣರಾಜೇಂದ್ರ ಗಿರಿಧಾಮ ಹಾಗೂ ಕಲ್ಲತ್ತಿಗಿರಿ ಅಭಿವೃದ್ಧಿಗೆ ಕಾಯಕಲ್ಪ
ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಅವಶ್ಯವಿರುವ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿಗಳು ಹಾಗೂ ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಕುರಿತು ಜಲ ಶಕ್ತಿ ಹಾಗೂ ರೈಲ್ವೆ ಇಲಾಖೆಯ ಕೇಂದ್ರ ರಾಜ್ಯ ಸಚಿವರಾದ ಸನ್ಮಾನ್ಯ ಶ್ರೀ ವಿ.ಸೋಮಣ್ಣ ರವರ ಜೊತೆ ಚರ್ಚೆ
ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸುವ ಯೋಜನೆ
ಗೃಹಲಕ್ಷ್ಮಿ ಯೋಜನೆಗೆ ಚಾಲನೆ
ಹುರುವನಹಳ್ಳಿ ಗ್ರಾಮದಿಂದ ಗೌಳಿಗರ ಕ್ಯಾಂಪ್ ಮಾರ್ಗವಾಗಿ ಗುಡ್ಡದ ಬೀರನಹಳ್ಳಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ
50ಕ್ಕೂ ಹೆಚ್ಚು ಸಂದ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಮಾಡಲಾಗಿದೆ
ಹಾದಿಕೆರೆ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ
ನಗರ ಭೂಸಾರಿಗೆ( DULT) ಅನುದಾನದಡಿ ನಿರ್ಮಿಸಲಾಗುವ ಉದ್ದೇಶಿತ ತರೀಕೆರೆ KSRTC ಬಸ್ ನಿಲ್ದಾಣದ ಮಾದರಿ ವಿನ್ಯಾಸ..
ದಿನಾಂಕ 30/12/2023ರ ಶನಿವಾರದಂದು #ಭದ್ರಾ_ಮೇಲ್ದಂಡೆ ಯೋಜನೆಯ ಭಾಗವಾಗಿ ಅಜ್ಜಂಪುರ ತಾಲ್ಲೂಕಿನ ಗಡೀಹಳ್ಳಿ ಮತ್ತು ಬಂಡ್ರೆ ಗ್ರಾಮದ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲು ಗಂಗಾ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಅಲ್ಲಿನ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆತ್ಮೀಯವಾಗಿ ಸ್ವಾಗತಿಸಿ ಕೃತಜ್ಞತಾ ಭಾವನೆಯಿಂದ ಅಭಿನಂದಿಸಿದರು... #ನುಡಿದಂತೆ_ನಡೆಯುತ್ತಿದ್ದೇನೆ #GHSrinivasa #Tarikere #MLA
Posted by Srinivas Gowda Hanumaiah on Saturday, 30 December 2023